Saturday 9 February 2019

ಅಡಿಕೆ ಗುಣ.

ಅಡಿಕೆ 

ವಸಡು ರಕ್ತ ಸ್ರಾವಕ್ಕೆ ಅಡಿಕೆ
ಹೆಸರುಗಳು: ಅಡಕೆ ಮರ,ಕಂಗು,ಅಡಕ್ಕ
ಮೂಲಿಕ ಪರಿಚಯ
"ಅಕ್ಕ , ಅಕ್ಕ, ಮರಾ ನೋಡು, ಮರದ ಮೇಲಿನ ಕಾಯಿ ನೋಡು,ಕಾಯಿ ತಿಂದೋರ ಬಾಯಿ ನೋಡು",ಮರದ ಭವ್ಯ ನಿಲುವು,ಫಲದ ಆಕರ್ಷಣೆ, ಹಾಗು ಶೃಂಗರದಲ್ಲಿ ಆದರ ಸ್ಥಾನವನ್ನು ಸೂಚಿಸುವ ಅಡಿಕೆಯ ಗಾದೆ ಮಾತು.ಅಡಿಕೆ ಮರದ ಯಾವುದೇ ಭಾಗ ಹೆಚ್ಚಿನ ಸಂಸ್ಕರಣೇ ಇಲ್ಲದೇ ಉಪಯೋಗ ಆಗುವುದು ಇದರ ಪ್ರತ್ಯೇಕತೆ.ತಾಂಬೂಲದೊಂದಿಗೆ ಅಡಿಕೆ ದೇವರಿಗೆ ಪ್ರಿಯ.
ಉಪಯೋಗಗಳು
ವಸಡು ರಕ್ತಸ್ರಾವಕ್ಕೆ: ಒಣ ಅಡಿಕೆ ಸುಟ್ಟು ಕರಿ ಮಾಡಿ ಇದರ ಪುಡಿ ಕೊಂಚ ಉಪ್ಪಿನ ಪುಡಿ ಬೆರೆಸಿ ಹಲ್ಲೂಜ್ಜುವುದು. ಹಾಗೂ ಅಡಿಕೆ ಜಜ್ಜಿ ಹಾಕಿ ಕುದಿಸಿದ ಕಷಾಯದಲ್ಲಿ ಕವಳ ಹಿಡಿ( ಬಾಯಿ ಮುಕ್ಕಳಿಸುವುದು)ಯೂವದು.1-2ವಾರ.
ಚರ್ಮ ರೋಗಕ್ಕೆ: ಕರಿಗೋಟನ್ನು ಅಕ್ಕಿ ತೊಳೆದ ನೀರಲ್ಲಿ ಅರೆದು ಮೈಗೆ ಅರ್ಧಗಂಟೆಗೊಮ್ಮೆ 3 ಬಾರಿ ಲೇಪಿಸಿ ತೊಳೆಯಬೇಕು.
                                                         ನಿಖಿಲ್ ಮಳಲಿ
                                                      ವ್ಯವಸ್ಥಾಪಕರು ಮಲೆನಾಡು ಅಗ್ರಿ-ರಿಸರ್ಚ್ ಅಂಡ್ ಡೆವಲಪಮೆಂಟ್ ಮಳಲಿ ಹೊಸನಗರ